ಹಾದುಹೋಗುವಾಗ ಆ ದಾರಿಯಲಿ
ಮುರುಕಳಿಸಿ ಬರುವುದು ನಿನ್ನ
ನೆನಪು
ಗೇಟಿನಲ್ಲಿ ನೀ ನಿಂತು ಕೈಬೀಸಿ ನಸುನಗುತ
ಸೂಸುತ್ತಿದ್ದ ನೀ ಮೂಡಿದ ಮಲ್ಲಿಗೆಯ
ಕಂಪು..
ನಿಂತಲ್ಲೇ ಮರೆಯುವೆನು..
ಮರುಕ್ಷಣವೇ ತಿಳಿಯುವೆನು ಕಣ್ಣೀರಿನಲಿ ಕರಗದಿರಲಿ ನಿನ್ನ ಬಿಂಬ...
ಸಂಜೆಗತ್ತಲಲಿ ಚುಕ್ಕಿಗಳ ಬೆಳಕಿರಲು
ಪಾರ್ಕಿನೊಳು ಹುಡುಕುವೆನು ನಿನ್ನ ಚಿತ್ರ
ಹುಚ್ಚು ಮನಕೆ ಹೇಗೆ ತಿಳಿಹೇಳಲಿ ...
ತೃಷೆತಣಿಸುವುದೇ??
.............ಮರೀಚಿಕೆಯ ಓಯಸಿಸ್??
1 comment:
chennagide ee kavithe !!
Post a Comment