ಕ್ಯಾಂಡಲಿನ ಹೊಗೆಯಿಂದ
ನೂರುರೂಪಗಳ ಸಾಲು,
ಹುರುಪು, ಚಪ್ಪಾಳೆಯಸದ್ದು, ಬಲೂನುಗಳು....
ಹಾಡುತಾ ಆಡುವರು ಕಣ್ಣಾ ಮುಚ್ಚಾಲೆ
ಕಣ್ಣತೆರುದು ನೋಡುತಿರೆ
ಹೊಗೆಯ ಕಾರ್ಮೋಡ, ಚಿತೆಯಿಂದೆಳುವುದು
ನೂರುರೂಪಗಳ ಸಾಲು.......
Wednesday, July 9, 2008
Tuesday, July 8, 2008
.....ಮರೀಚಿಕೆಯ ಓಯಸಿಸ್??
ಹಾದುಹೋಗುವಾಗ ಆ ದಾರಿಯಲಿ
ಮುರುಕಳಿಸಿ ಬರುವುದು ನಿನ್ನ
ನೆನಪು
ಗೇಟಿನಲ್ಲಿ ನೀ ನಿಂತು ಕೈಬೀಸಿ ನಸುನಗುತ
ಸೂಸುತ್ತಿದ್ದ ನೀ ಮೂಡಿದ ಮಲ್ಲಿಗೆಯ
ಕಂಪು..
ನಿಂತಲ್ಲೇ ಮರೆಯುವೆನು..
ಮರುಕ್ಷಣವೇ ತಿಳಿಯುವೆನು ಕಣ್ಣೀರಿನಲಿ ಕರಗದಿರಲಿ ನಿನ್ನ ಬಿಂಬ...
ಸಂಜೆಗತ್ತಲಲಿ ಚುಕ್ಕಿಗಳ ಬೆಳಕಿರಲು
ಪಾರ್ಕಿನೊಳು ಹುಡುಕುವೆನು ನಿನ್ನ ಚಿತ್ರ
ಹುಚ್ಚು ಮನಕೆ ಹೇಗೆ ತಿಳಿಹೇಳಲಿ ...
ತೃಷೆತಣಿಸುವುದೇ??
.............ಮರೀಚಿಕೆಯ ಓಯಸಿಸ್??
Subscribe to:
Posts (Atom)